ಮಂಗಳೂರು, ಫೆಬ್ರವರಿ ೧೪: ಗಂಡ-ಹೆಂಡತಿ, ಮುದ್ದಾದ ನಾಲ್ವರು ಹೆಣ್ಣು ಮಕ್ಕಳು ಎಲ್ಲವೂ ಅವರು ಎನಿಸಿ ದಂತೆಯೇ ಆಗಿದ್ದರೆ ಸುಖೀ ಕುಟುಂಬಕ್ಕೆ ಬೇರೇನೂ ಬೇಕಿರಲಿಲ್ಲ. ಆದರೆ ಬ್ಲಡ್ ಕ್ಯಾನ್ಸರ್ ಎನ್ನುವ ಮಹಾಮಾರಿ ಅವರ ಪುಟ್ಟ ಸಂಸಾರ ವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಾತ್ರವಲ್ಲದೆ ಅವರ ನೆಮ್ಮದಿಯ ಜೀವನಕ್ಕೂ ಕಲ್ಲು ಹಾಕುತ್ತಿದೆ.
ಉಳ್ಳಾಲ ಸಮೀಪದ ಮುಡಿಪು ಎಂಬಲ್ಲಿನ ಮುದುಂಗರಕಟ್ಟೆಯ ಪುಟ್ಟ ಮನೆಯಲ್ಲಿ ನಾಸಿರ್ ಮತ್ತು ಮೈಮೂನಾ ದಂಪತಿಗಳು ವಾಸಿಸು ತ್ತಿದ್ದರು. ನಾಲ್ವರು ಹೆಣ್ಣು ಮಕ್ಕಳನ್ನು ಹೊಂದಿದ ಸುಖೀ ಕುಟುಂಬ ಅವರ ದಾಗಿತ್ತು. ಆದರೆ ಅಷ್ಟರಲ್ಲಿ ವಿಧಿಯ ಕ್ರೂರಲೀಲೆಗೆ ಮೈಮೂನಾ ಬಿದ್ದರು. ಒಂದೂವರೆ ವರ್ಷದಿಂದ ಬ್ಲಡ್ ಕ್ಯಾನ್ಸರ್ ಎನ್ನುವ ಭಯಂಕರ ವ್ಯಾಧಿಗೆ ತುತ್ತಾಗಿರುವ ಮೈಮೂನಾ ಆಸ್ಪತ್ಪೆಯ ಹಾಸಿಗೆಯಲ್ಲಿ ಮಲಗಿ ಆಗಸ ದಿಟ್ಟಿ ಸುತ್ತಾ ರೋಧಿಸುತ್ತಿದ್ದರೆ ಪತಿ ನಾಸಿರ್ ಧೈರ್ಯ ಹೇಳುತ್ತಿದ್ದಾರೆ.
ಪತ್ನಿಗೆ ಸಮಾಧಾನ ಹೇಳುವು ದನ್ನು ಬಿಟ್ಟು ನಾಸಿರ್ ಕೈಯಲ್ಲಿ ಬೇರೇನೂ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಮೈಮೂನಾರಿಗೆ ಬಂದಿರುವ ರೋಗವೇ ಅಂತಹದ್ದು. ಡಾ. ಸನತ್ ಹೆಗ್ಡೆಯವರು ಮೈಮೂನಾ ಮತ್ತೆ ಮೊದಲಿನಂ ತಾಗಲು ಕಮ್ಮಿ ಎಂದರೂ ಐದು ಲಕ್ಷ ಬೇಕೇಬೇಕು ಎಂದಿದ್ದಾರೆ. ಪತ್ನಿ, ಸಂಬಂಧಿಗಳ ಚಿನ್ನವನ್ನು ಬ್ಯಾಂಕ್ ನಲ್ಲಿಟ್ಟು ಈಗಾಗಲೇ ಸಾಲ ಪಡೆದಾ ಗಿದೆ. ದಾನಿಗಳ ನೆರವು ಬೇಡಿದ್ದರೂ ಅಗತ್ಯವಿರುವ ಹಣ ಹೊಂದಿಸಲಾಗದೆ ನಾಸಿರ್ ಪರದಾಡುತ್ತಿದ್ದಾರೆ. ತುತ್ತು ಕೂಳಿಗಾಗಿ ಕೂಲಿ ಕೆಲಸ ಮಾಡುತ್ತಿದ್ದ ನಾಸಿರ್ ಆಸ್ಪತ್ರೆಯಲ್ಲಿನ ಪತ್ನಿಯನ್ನು ಉಪಚರಿಸಲು ನಿಂತಿರುವುದರಿಂದ ಕೆಲಸವೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ. ಈಗಾಗಲೇ ಐದು ಲಕ್ಷದಷ್ಟು ಖರ್ಚು ಮಾಡಿದ್ದರೂ ಮೈಮೂನಾ ಹಾಸಿಗೆ ಬಿಟ್ಟು ಮೇಲೇಳುವಂತಾಗಲಿಲ್ಲ. ದಾನಿಗಳ, ಹಿತೈಷಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿರುವ ನಾಸಿರ್ರವರು ತಮ್ಮ ಪತ್ನಿಯನ್ನು ಹೇಗಾದರೂ ಮಾಡಿ ಉಳಿಸಲೇಬೇಕು ಎಂದು ಪಣ ತೊಟ್ಟಿದ್ದಾರೆ. ಇವರಿಗೆ ಸಹಾಯ ಮಾಡಲು ಸಿಂಡಿಕೇಟ್ ಬ್ಯಾಂಕ್, ದೇರಳಕಟ್ಟೆಯಲ್ಲಿನ ನಾಸಿರ್ ಹೆಸರಿನ ಉಳಿತಾಯ ಖಾತೆ ಸಂಖ್ಯೆ - 02192200109245 ಅನ್ನು ಬಳಸಬಹುದಾಗಿದೆ. ಇವರನ್ನು ಭೇಟಿ ಮಾಡಲು ಹೈಲ್ಯಾಂಡ್ ಆಸ್ಪತ್ರೆಯನ್ನು ಸಂದರ್ಶಿಸಬಹುದು. ಅಥವಾ ನಾಸಿರ್, ಮುದುಂಗರಕಟ್ಟೆ, ಬಾಳೆಪುಣಿ ಗ್ರಾಮ, ಬಂಟ್ವಾಳ ತಾಲೂಕು ಇಲ್ಲಿ ಮುಖತ: ಭೇಟಿಯಾಗಬಹುದು. ನಾಸಿರ್ ಮೊಬೈಲ್ ಸಂಖ್ಯೆ (9980049841) ಅನ್ನು ಬಳಸಬಹುದು.